ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದಿಂದ ರಾಷ್ಟ್ರೀಯ ಶಿಕ್ಷಣ ನೀತಿ (ಕರಡು) ಕುರಿತು ಚಿಂತನ ಮಂಥನ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದಿಂದ ರಾಷ್ಟ್ರೀಯ ಶಿಕ್ಷಣ ನೀತಿ (ಕರಡು) ಕುರಿತು ಚಿಂತನ ಮಂಥನ ಏರ್ಪಡಿಸಲಾಗಿತ್ತು, ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಶ್ರೀ ಶಿವಾನಂದ ಸಿಂಧನಕೇರಾ, ಪ್ರಧಾನ ಕಾರ್ಯದರ್ಶಿಗಳು, ABRSM,ಇವರಿ ವಹಿಸಿದ್ದರು, ಕರಡು ಶಿಕ್ಷಣ ನೀತಿಯ ನಿರೂಪಕರಲ್ಲಿ ಒಬ್ಬರಾದ ಡಾ. ಎಂ.ಕೆ ಶ್ರೀಧರ್, ಶಿಕ್ಷಣ ನೀತಿಯ ಕುರಿತು ಸಂಪೂರ್ಣ ಮಾಹಿತಿ ನೀಡಿದರು , ಮಾಜಿ ಶಿಕ್ಷಣ ಸಚಿವರು ಹಾಗೂ ಹಾಲಿ ಶಾಸಕರು ಆಗಿರುವ ಶ್ರೀ ತನ್ವೀರ್ ಸೇಠ್ ರವರು ಭಾಗವಹಿಸಿ ಮಾತನಾಡಿದರು ,ಹೊಸ ಶಿಕ್ಷಣ ನೀತಿ ತರುತ್ತಿರುವುದನ್ನು ಸ್ವಾಗತಿಸಿದರು.
ವಿಧಾನ ಪರಿಷತ್ ಸದಸ್ಯರಾದ ಶ್ರೀ ಪುಟ್ಟಣ್ಣ, ವೈ.ಎ ನಾರಾಯಣಸ್ವಾಮಿ, ಶರಣಪ್ಪ ಮಟ್ಟೂರು , ಅರುಣ್ ಶಹಾಪೂರ ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ತಾರಾ ಅನುರಾಧ, ಶ್ರೀ ಶಶೀಲ್ ನಮೋಶಿ, ಮೋಹನ್ ಲಿಂಬಿಕಾಯಿ, ರಮೇಶ್ ಬಾಬು ರವರು , ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯ ನಿರ್ವಾಹಕ ನಿರ್ದೇಶಕರಾದ ಶ್ರೀ ಕೋರಿ ರವರು , ಡಿ.ಸಿ.ಐ ಸದಸ್ಯರಾದ ಡಾ. ಜೈಕಾರ್ ಶೆಟ್ಟಿ, ಮೈಸೂರು ವಿ.ವಿ ಯ ಮಾಜಿ ಕುಲಪತಿ ಬಸವಾರಾಜು , ರಘು ಅಕಮಂಚಿ , ಹಾಗು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸಂದೀಪ್ ಬೂದಿಹಾಳರವರು ಸಭೆಯಲ್ಲಿ ಭಾಗಹಿಸಿದ್ದರು . ಗಂಗಾಧರ ಆಚಾರಿ, ಚಿದಾನಂದ ಪಾಟಿಲ್,ಶ್ರೀಮತಿ ಮಮತ ಡಿ.ಕೆ, ಶ್ರೀಮತಿ ವಾಸುಕಿ, ಶ್ರೀ ಕೋಟ್ರಪ್ಪ,ಶ್ರೀ ವೃಷಭೇಂದ್ರ ಸ್ವಾಮಿ, ಪೆಪ್ಸಿ ಬಸವರಾಜು, ಇನ್ನಿತರರು ಭಾಗವಹಿಸಿದ್ದರು.